ಕದಂಬದಿಂದ ಸ್ವಾಲಂಬನೆಯ ಕುರಿತೊಂದು ಸಂವಾದ
ಆರಂಭದಿಂದಲೂ ಕದಂಬ ಸಂಸ್ಥೆ ಒತ್ತುನೀಡುತ್ತಾ ಬಂದದ್ದು ಜನರಿಗೊಂದು ಸ್ವಾಲಂಬನೆಯ ಬದುಕನ್ನು ಕಟ್ಟಿಕೊಡುವ ನಿಟ್ಟಿನಲ್ಲೇ... ಇದೀಗ ನಮ್ಮ ನೆಚ್ಚಿನ ಪ್ರಧಾನಿ ಮೋದೀಜಿಯವರು "ಆತ್ಮನಿರ್ಭರ ಭಾರತ" ಎಂಬ ಘೋಷಣೆಯಡಿ ಸಮರ್ಥ ಸಮೃದ್ಧ ಸ್ವಾವಲಂಬೀ ಭಾರತವನ್ನು ನಿರ್ಮಿಸುವ ಮಹಾ ಸಂಕಲ್ಪ ತೊಟ್ಟು ದೃಢ ಹೆಜ್ಜೆಯನ್ನಿರಿಸಿದ್ದಾರೆ. ಇದಕ್ಕೆ ಸಂವಾದಿಯಾಗಿ ಕದಂಬ ಸಂಸ್ಥೆಯೀಗ ಭಾರತ ದೇಶದ ಗತವೈಭವವನ್ನು ಮರು ಅನ್ವೇಷಿಸಿ ಸದೃಢ ನವಭಾರತವನ್ನು ನಿರ್ಮಿಸುವ ಧ್ಯೇಯೋದ್ದೇಶದೊಂದಿಗೆ ಸ್ವಾಲಂಬನೆಯ ಕುರಿತಾಗಿ ವಿದ್ವತ್ಪೂರ್ಣ ಸಂವಾದವೊಂದನ್ನು ಆಯೋಜಿಸಿದೆ. "ನವೀನ ಅವಿಷ್ಕಾರಗಳೇ ಭಾರತದ ಮರು ಅನ್ವೇಷಣೆಗೆ ಮೂಲಮಂತ್ರ" ಎಂಬ ವಿಷಯದ ಕುರಿತು ಖ್ಯಾತ ವಕೀಲ, ಹೊಸ ಸಂಶೋಧನೆಗಳ ಬೌದ್ಧಿಕ ಹಕ್ಕುಗಳ ಕಾನೂನು ತಜ್ಞ(ಪೇಟೆಂಟ್ ಅಟಾರ್ನಿ) ಮತ್ತು ಲೇಖಕರೂ ಆದ ಶ್ರೀ ಕಿರಣ್ ಬೆಟ್ಟದಾಪುರ್ ಈ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಇದೇ ಡಿಸೆಂಬರ್ 27 ರಂದು ಸಂಜೆ 5:30 ರಿಂದ 6:30 ರ ಸಮಯದಲ್ಲಿ ಗೋಕರ್ಣದ ಮೇಲಿನಕೇರಿ ಆಚಾರಿಕಟ್ಟೆಯ ಹತ್ತಿರವಿರುವ ಲಲಿತಾ ಆರ್ಟ್ ಗ್ಯಾಲರಿಯಲ್ಲಿ ನಡೆಯುವ ಈ ಸಂವಾದ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗವಹಿಸಬೇಕೆಂದು ವಿನಮ್ರ ವಿನಂತಿ.
ನೋಂದಣಿ ಲಿಂಕ್: https://forms.gle/DGuncVnjxz3ezpkH8
ಸಂಪರ್ಕ ಸಂಖ್ಯೆ:
ರವಿ ಗುನಗಾ : 9945152815
ದಿಲೀಪ್ ಹಿರೇಗಂಗೆ : 7353450395
#ಕದಂಬ