loader

ಯಲ್ಲಾಪುರ - ಕೆ. ಎಸ್. ಹೆಗ್ಡೆ ಆಸ್ಪತ್ರೆ ಮಂಗಳೂರು, ಕದಂಬ ಫೌಂಡೇಶನ್ ಶಿರಸಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಕಿರವತ್ತಿ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಸ್ಪತ್ರೆಯ ನುರಿತ ವೈದರುಗಳಿಂದ ಹಮ್ಮಿಕೊಳ್ಳಲಾಗಿತ್ತು.

ಕಿರವತ್ತಿ ಪಂಚಾಯತ್ ಮತ್ತು ಮದನೂರ ಪಂಚಾಯತಿಯ ನಾಲ್ಕು ನೂರಕ್ಕೂ ಅಧಿಕ ಜನರನ್ನು ವೈದ್ಯಕೀಯ ತಜ್ಞರು ತಪಾಸಣೆ ಮಾಡಿದರು. ರಕ್ತದ ಒತ್ತಡ ಮಧುಮೇಹ ಪರೀಕ್ಷೆ ಹಾಗೂ ಈ ಸಿ ಜಿ ಪರೀಕ್ಷೆಗಳನ್ನು ಮಾಡಿ ಔಷಧವನ್ನು ಉಚಿತವಾಗಿ ನೀಡಲಾಯಿತು, ನೂರಾರು ಮಕ್ಕಳು ಸಹ  ಶಿಬಿರದ ಲಾಭ ಪಡೆದರು.

ಆರೋಗ್ಯ ಶಿಬಿರವನ್ನು  ಪಂಚಾಯತ್ ರಾಜ್ ವಿಕೇಂದ್ರೀಕರಣ ಉಪಾಧ್ಯಕ್ಷರಾದ ಪ್ರಮೋದ್ ಹೆಗಡೆ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು‌.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಗಾಂವಕರ, ವನವಾಸಿ ಕಲ್ಯಾಣ ಹಿತರಕ್ಷಣಾ ಪ್ರಮುಖ ದೊಂಡು ಪಾಟೀಲ್, ಪ್ರಮುಖರಾದ ವಿಠ್ಠಲ ಪಾಂಡ್ರಮೀಸೆ, ಬಾಪು ತಾಟೆ, ಸಂಭಾಜಿ ಕಾಂಬಳೆ, ಸಾಮಾಜಿಕ ಕಾರ್ಯಕರ್ತ ಮಹೇಶ ಪೂಜಾರ, ರಾಮಕೃಷ್ಣ ಭಟ್, ಪ್ರಭು ಚಿಚಕಂಡಿ, ಅರ್ಜುನ ಬೆಂಗೇರಿ, ಬಜ್ಜು ಪಿಂಗಳೆ, ಸುಭಾಸ ಶೇಷಗೇರಿ, ಲಕ್ಷ್ಮಣ ತೋರತ್, ಸೋನು ಜಂಗ್ಲೆ, ಬಾಬು ಶೆಂಡಗೆ ಹಾಗೂ ಕಾರ್ಯಕರ್ತರು ಆಸ್ಪತ್ರೆಯ ಅಧಿಕಾರಿಗಳು ಉಪಸ್ಥಿತಿತರಿದ್ದರು.