ಕದಂಬ ಫೌಂಡೇಶನ್ ಶಿರಸಿ, ನೆರಳು ಚಾರಿಟೇಬಲ್ ಟ್ರಸ್ಟ್ ಮೆಣಸಿ ಸೀಮೆಯ ಸೇವಾ ಸಹಕಾರಿ ಸಂಘ, ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ದಿನಾಂಕ ೧೬.೧೧.೨೦೧೯ ಶನಿವಾರದಂದು ಶಿರಸಿ ತಾಲೂಕಿನ ವಾನಳ್ಳಿ ಮೆಣಸಿ ಸೀಮೆಯ ಸೇವಾ ಸಹಕಾರಿ ಸಂಘದ ಕಟ್ಟಡದಲ್ಲಿ ನೆರವೇರಿತು.
ಮೆಣಸಿ ಸೀಮೆಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಎಸ್.ಎನ್.ಹೆಗಡೆ, ಕೋಟಿಕೊಪ್ಪ ಇವರು ದೀಪ ಬೆಳಗುವುದರ ಮೂಲಕ ಶಿಭಿರವನ್ನು ಉದ್ಘಾಟಿಸಿದರು. ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ| ರತಿಕ ಡಿ. ಶೆಣೈ, ಮೊಣಕಾಲಿನ ಶಸ್ತ ಚಿಕಿತ್ಸಾ ತಜ್ಞರಾದ ಡಾ| ವಿಕ್ರಂ ಶೆಟ್ಟಿ, ಕಿವಿ, ಮೂಗು, ಗಂಟಲು ತಜ್ಞರಾದ ಡಾ| ಬಿನಿಯಮ್ ಕೆ. ಶಸ್ತ ಚಿಕಿತ್ಸಾ ತಜ್ಞರಾದ ಡಾ| ನವೀನ್ ಕುಮಾರ, ಚರ್ಮರೋಗ ತಜ್ಞರಾದ ಡಾ| ಜೋಶಿಕ ಭಂಡಾರಿ, ಮೆಡಿಸಿನ್ ತಜ್ಞರಾದ ಡಾ| ಕೃಷ್ಣಮೂರ್ತಿ ಹೆಗ್ಡೆ ಹಾಗೂ ಇವರು ತಮ್ಮ ತಂಡದ ವೈದ್ಯರೊಂದಿಗೆ ಭಾಗವಹಿಸಿ ತಪಾಸಣೆ ನಡೆಸಿದರು. ಸುಮಾರು ೪೧೨ ಜನರು ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಶಿಭಿರದ ಪ್ರಯೋಜನ ತೆಗೆದುಕೊಂಡರು.
ಕಾರ್ಯಕ್ರಮದಲ್ಲಿ ಮೆಣಸಿ ಸೀಮೆಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಜಿ.ಟಿ.ಹೆಗಡೆ, ಶ್ರೀ ಎನ್.ಕೆ. ಹೆಗಡೆ, ಶ್ರೀ ಸುರೇಶ ಹೆಗಡೆ, ಶ್ರೀ ಮಂಜುನಾಥ ಭಟ್, ಕದಂಬ ಫೌಂಡೇಶನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಸುರೇಶ ಶೆಟ್ಟಿ, ನೆರಳು ಚ್ಯಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಶ್ರೀ ಗೋಪಾಲ ಶೆಟ್ಟಿ ಮುಂತಾದವರು ಭಾಗವಹಿಸಿದ್ದರು.