loader

ಕದಂಬ ಫೌಂಡೇಶನ್ ಶಿರಸಿ, ನೆರಳು ಚಾರಿಟೇಬಲ್ ಟ್ರಸ್ಟ್ ಹಾಗೂ ಆಸ್ಮಿ ಟ್ರಸ್ಟ್ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು  ದಿನಾಂಕ ೧೭.೧೧.೨೦೧೯ ರವಿವಾರದಂದು ಯಲ್ಲಾಪುರ ತಾಲೂಕಿನ ಭರತನಹಳ್ಳಿ (ಮಾವಿನಕಟ್ಟಾ)ಯ ಪ್ರಗತಿ ವಿದ್ಯಾಲಯದಲ್ಲಿ ನಡೆಯಿತು.

 

ಪ್ರಗತಿ ವಿದ್ಯಾಲಯದ ಅಧ್ಯಕ್ಷರಾದ ಶ್ರೀ ಎಸ್.ಎನ್.ಹೆಗಡೆಯವರು   ದೀಪ ಬೆಳಗುವುದರ ಮೂಲಕ ಶಿಭಿರವನ್ನು ಉದ್ಘಾಟಿಸಿದರು. ಕೆ.ಎಸ್.ಹೆಗ್ಡೆ ಆಸ್ಪತ್ರೆಯ  ಮಕ್ಕಳ ತಜ್ಞರಾದ ಡಾ| ರತಿಕ ಡಿ. ಶೆಣೈ, ಮೊಣಕಾಲಿನ ಶಸ್ತ ಚಿಕಿತ್ಸಾ ತಜ್ಞರಾದ ಡಾ| ವಿಕ್ರಂ ಶೆಟ್ಟಿ, ಕಿವಿ, ಮೂಗು, ಗಂಟಲು ತಜ್ಞರಾದ ಡಾ| ಬಿನಿಯಮ್ ಕೆ. ಶಸ್ತ ಚಿಕಿತ್ಸಾ ತಜ್ಞರಾದ ಡಾ| ನವೀನ್ ಕುಮಾರ, ಚರ್ಮರೋಗ ತಜ್ಞರಾದ ಡಾ| ಜೋಶಿಕ ಭಂಡಾರಿ, ಮೆಡಿಸಿನ್ ತಜ್ಞರಾದ ಡಾ| ಕೃಷ್ಣಮೂರ್ತಿ ಹೆಗ್ಡೆ ಹಾಗೂ ಇವರು ತಮ್ಮ ತಂಡದ ವೈದ್ಯರೊಂದಿಗೆ ಭಾಗವಹಿಸಿ ತಪಾಸಣೆ ನಡೆಸಿದರು. ಸುಮಾರು ೩೯೧ ಜನರು ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಶಿಭಿರದ ಪ್ರಯೋಜನ ಪಡೆದುಕೊಂಡರು.

 

ಕಾರ್ಯಕ್ರಮದಲ್ಲಿ ಪ್ರಗತಿ ವಿದ್ಯಾಲಯದ ಮುಖ್ಯೋಪಾಧ್ಯಾಯರಾದ ಶ್ರೀ ವಿನಾಯಕ ಹೆಗಡೆ, ತಾಲೂಕಾ ಪಂಚಾಯತ್ ಸದಸ್ಯರಾದ ಶ್ರೀ ನಟರಾಜ ಗೌಡರ್, ಶ್ರೀ ಸತೀಷ ಹೆಗಡೆ, ಅರುಣ ಕುಮಾರ ಗೌಡರ್, ಕದಂಬ ಫೌಂಡೇಶನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಸುರೇಶ ಶೆಟ್ಟಿ, ನೆರಳು ಚ್ಯಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಶ್ರೀ ಗೋಪಾಲ ಶೆಟ್ಟಿ ಆಸ್ಮಿ ಟ್ರಸ್ಟ್ನ ಅಧ್ಯಕ್ಷರಾದ ಶ್ರೀ ತನ್ಮಯ ಹೆಗಡೆ ಮುಂತಾದವರು ಭಾಗವಹಿಸಿದ್ದರು.