ಇತ್ತೀಚಿಗೆ ಬೆಳಗಾವಿ ಜಿಲ್ಲೆಯ ಕಿತ್ತೂರಿನ ಕುಲವಳ್ಳಿ ಗ್ರಾಮದಲ್ಲಿ ಕದಂಬ ಪೌಂಡೇಶನ್ - ಶಿರಸಿ, ಕೃಷಿ ವಿಶ್ವವಿದ್ಯಾಲಯ - ಧಾರವಾಡ,ಕೃಷಿ ಇಲಾಖೆ,ಕೃಷಿ ವಿಜ್ಞಾನ ಕೇಂದ್ರ ಹಾಗೂ CIMAP, ಇವರ ಸಹಯೋಗದಲ್ಲಿ ರೈತ ಸಂಪರ್ಕ ಹಾಗೂ ರೈತರಿಗೆ ಹೊಸ ಬೆಳೆಗಳ ಪರಿಚಯ ಕಾರ್ಯಕ್ರಮದಲ್ಲಿ ಮಾನ್ಯ ಸಂಸದರು ಹಾಗು ಕದಂಬ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಅನಂತಕುಮಾರ ಹೆಗಡೆಯವರು ರೈತರಿಗೆ ಹೊಸ ಬೆಳೆಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಡಾ ವೇಣುಗೋಪಾಲ್, ಡಾ ಎಸ್. ಎಂ. ಹಿರೇಮಠ, KMF ನಿರ್ದೇಶಕರಾದ ಡಾ. ಕರವಣ್ಣನವರ್, ಕೃಷಿ ವಿಜ್ಞಾನ ಕೇಂದ್ರದ ಶ್ರೀಮತಿ ಶ್ರೀದೇವಿ ಅಂಗಡಿ, ಸಹಾಯಕ ಕೃಷಿ ಅಧಿಕಾರಿಯಾದ ಶ್ರೀಮತಿ ಪ್ರತಿಭಾ ಹೂಗಾರ್, ಬೆಂಗಳೂರು CIMAP ಸಂಸ್ಥೆಯ ಡಾ. ಯೋಗೇಂದ್ರ ಮುಂತಾದವರು ಉಪಸ್ಥಿತರಿದ್ದರು.
#ಕದಂಬ_ಕಾರ್ಯಾಲಯ