loader

ಜಸ್ಟಿಸ್ ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ, ಮಂಗಳೂರು, ಕದಂಬ ಫೌಂಡೇಶನ್ ಶಿರಸಿ, ಧಾತ್ರಿ ಫೌಂಡೇಶನ್ ಯಲ್ಲಾಪುರ, ನೆರಳು ಚಾರಿಟೇಬಲ್ ಟ್ರಸ್ಟ್ ಹಾಗೂ ಸಂಯುಕ್ತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿ ಗುಳ್ಳಾಪುರ ಇವರ ಸಹಯೋಗದೊಂದಿಗೆ ದಿನಾಂಕ ೦೮-೦೨-೨೦೨೦ ಶನಿವಾರದಂದು ಯಲ್ಲಾಪುರ ತಾಲೂಕಿನ ಗುಳ್ಳಾಪುರದ  ಸಂಯುಕ್ತ ಪದವಿಪೂರ್ವ ಕಾಲೇಜ್ನಲ್ಲಿ ಎಲುಬು ಮತ್ತು ಮೂಳೆ, ಚರ್ಮರೋಗ, ಮಕ್ಕಳ ಕಾಯಿಲೆ, ಕಿವಿ, ಮೂಗು, ಗಂಟಲು ಹಾಗೂ ಜನರಲ್ ಕಾಯಿಲೆಗಳಿಗೆ ಸಂಬಂಧಿಸಿದಂತೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು

 ಊರಿನ ಹಿರಿಯರಾದ  ಶ್ರೀ ಶ್ರೀಕಾಂತ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂದರ್ಭದಲ್ಲಿ ಜಸ್ಟಿಸ್ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ ಹೇಮಂತ ಶೆಟ್ಟಿ, ಧಾತ್ರಿ ಫೌಂಡೇಶನ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಭಟ್, ಕದಂಬ ಫೌಂಡೇಶನ್ ಮುಖ್ಯ ಕಾರ್ಯನಿರ್ವಾಹಕರಾದ ಶ್ರೀ ಸುರೇಶ ಶೆಟ್ಟಿ, ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ನಾರಾಯಣ ಭಟ್, ತಾಲೂಕ ಪಂಚಾಯತ್ ಉಪಾದ್ಯಕ್ಷರಾದ ಶ್ರೀಮತಿ ಚಂದ್ರಕಲಾ ಭಟ್, ಸ್ಥಳೀಯ ಪ್ರಮುಖರಾದ ಶ್ರೀ ಆನಂದರಾಯ ಗೋಳಸಿಂಗಿ ಶ್ರೀ ವಿಶ್ವೇಶ್ವರ ಭಟ್ ಏಕಾನ್, ಶ್ರೀ ಕೃಷ್ಣ ಗಾಂವಕರ್ ಮುಂತಾದವರು ಪಾಲ್ಗೊಂಡಿದ್ದರು

  ಶಿಬಿರದಲ್ಲಿ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಮೊಣಕಾಲಿನ ತಜ್ಞರಾದ ಡಾ|| ನಿರ್ಮಲ ಬಾಬು, ಮಕ್ಕಳ ತಜ್ಞರಾದ ಡಾ|| ಕಿಶನ್ ಆಳ್ವ, ಚರ್ಮರೋಗ ತಜ್ಞರಾದ ಡಾ|| ಟೊನಿಟ ಮಾರಿಯೊಲ್ಲ, ಕಿವಿ, ಗಂಟಲು,ಮೂಗು ತಜ್ಙರಾದ ಡಾ|| ಮರೀನಾ ಸಲ್ದಾನ, ಜನರಲ್ ಫಿಜಿಶಿಯನ್ ಡಾ||ರೋಹಿನ್ ದುಬ್ಬಾಳ್, ಶಸ್ತ್ರ ಚಿಕಿತ್ಸಾ ತಜ್ಞರಾದ  ಡಾ|| ಪ್ರವೀಣ ಪವಾರ್, ಇವರು ತಮ್ಮ ತಂಡದ ವೈದ್ಯರೊಂದಿಗೆ ಭಾಗವಹಿಸಿ ತಪಾಸಣೆ ನಡೆಸಿದರು.

 ಸುಮಾರು ೩೦೮ ಜನರು ತಪಾಸಣೆಗೊಳಪಟ್ಟು, ಶಿಬಿರದ ಪ್ರಯೋಜನ ಪಡೆದುಕೊಂಡರು. ಇವರಿಗೆ ಉಚಿತವಾಗಿ ಔಷಧಗಳನ್ನು ನೀಡಲಾಯಿತು. ಹಾಗೂ ಶಿಬಿರದಲ್ಲಿ ಪಾಲ್ಗೊಂಡ ಗಂಭೀರ ಸ್ವರೂಪದ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಬರುವಂತೆ ತಿಳಿಸಲಾಯಿತು ಇವರಿಗೆ ರಿಯಾಯತಿ ದರದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತದೆ.

 #ಕದಂಬ_ಕಾರ್ಯಾಲಯ